ಬೇಕಾಗುವ ಸಾಮಗ್ರಿಗಳು
500 ಗ್ರಾಂ. ಕೋಳಿಮಾಂಸ
ಅರ್ಧ ಕಪ್ ಮೊಸರು
1 ಸ್ಪೂನ್ ಮೆಣಸಿನ ಪುಡಿ, ಶುಂಠಿ ಪುಡಿ, ನಿಂಬೆ ರಸ, ಜೀರಿಗೆ, ಗರಂ ಮಸಾಲ, ಎಣ್ಣೆ
2 ಸ್ಪೂನ್ ಬೆಣ್ಣೆ
ಮಾಡುವ ವಿಧಾನ:
ಮಾಂಸವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಈ ಮಾಂಸವನ್ನು ಹಾಕಿ ಮಣಸಿನ ಪುಡಿ, ನಿಂಬೆ ರಸ, ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಹೀಗೆ ಮಾಡಿದ
ಮಾಂಸದ ಮಿಶ್ರಣವನ್ನು ಅರ್ಧ ಗಂಟೆಯವರೆಗೆ ಇಡಬೇಕು. ಮತ್ತೊಂದು ಪಾತ್ರೆಯಲ್ಲಿ ಮೊಸರು, ಶುಂಠಿ ಪೇಸ್ಟ್, ಲಿಂಬೆ ರಸ, ಗರಂ ಮಸಾಲ, ಜೀರಿಗೆ, ಮೆಣಸಿನ ಪೇಸ್ಟ್ ಇವುಗಳನ್ನೆಲ್ಲ ಸೇರಿಸಿ
ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಮಾಂಸಕ್ಕೆ ಸೇರಿಸಿ. ಮಾಂಸವು ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳುವಂತೆ ಮಾಡಲು ಫೋರ್ಕ್‌ನ ಸಹಾಯದಿಂದ ಮಾಂಸದಲ್ಲಿ ಸಣ್ಣ ಸಣ್ಣ ತೂತುಗಳನ್ನು
ಮಾಡಿ. ಈ ಮಿಶ್ರಣವನ್ನು ರಾತ್ರಿ ಪೂರ್ತಿ ಶೀತಲೀಕರಿಸಿ. ನಂತರ ಇದನ್ನು ಒಲೆಯಲ್ಲಿ 10 ನಿಮಿಷಗಳವರೆಗೆ ಬೇಯಿಸಿ. ಇದಾದ ನಂತರ ಮಾಂಸಕ್ಕೆ ಬೆಣ್ಣೆ ಸವರಿ, ಒಂದು ನಿಮಿಷ ಕರಿಯಿರಿ. ಈಗ ಚಿಕನ್ ಕಬಾಬ್ ಸಿದ್ಧ.
Leave a Reply