ಚಿಕನ್ ಟಿಕ್ಕಾ ಫ್ರೈ(chiken tikka fry)

ಬೇಕಾಗುವ ಸಾಮಾಗ್ರಿಗಳು

500 ಗ್ರಾಂ. ಕೋಳಿಮಾಂಸ
½ ಕಪ್ ಮೊಸರು
1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ಪೇಸ್ಟ್, ಜೀರಿಗೆ ಹುಡಿ, ಗರಂ ಮಸಾಲ
1 ಸ್ಪೂನ್ ನಿಂಬೆ ರಸ, ಶುಂಠಿ ಪೇಸ್ಟ್, ಎಣ್ಣೆ, ಬೆಣ್ಣೆ

ಮಾಡುವ ವಿಧಾನ:
ಕೋಳಿಮಾಂಸವನ್ನು 1 ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ನಂತರ ಅವುಗಳನ್ನು ಸೀಳಿ. ಈ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿ ಮೆಣಸಿನ ಪುಡಿ, ನಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಚೆನ್ನಾಗಿ ಮಿಶ್ರ ಮಾಡಿ, ಒಂದು ಗಂಟೆಯವರೆಗೆ ಹಾಗೇ ಇಡಿ. ನಂತರ ಮೊಸರು, ಶುಂಠಿ ಪೇಸ್ಟ್, ಮೆಣಸಿನ ಪೇಸ್ಟ್, ಜೀರಿಗೆ ಪುಡಿ, ಗರಂ ಮಸಾಲ, ಎಣ್ಣೆ ಇವೆಲ್ಲವನ್ನೂ ಸೇರಿಸಿ ಮಿಶ್ರ ಮಾಡಿ. ಇದನ್ನು ಮತ್ತೆ ನಾಲ್ಕು ಗಂಟೆಯವರೆಗೆ ಇಡಿ. ನಂತರ ಮೊದಲೇ ಕಾಯಿಸಿದ ಒಲೆಯಲ್ಲಿ 15 ನಿಮಿಷಗಳವರೆಗೆ ಹುರಿಯಿರಿ. ಬೆಣ್ಣೆಯನ್ನು ಸವರಿ ಮತ್ತೆ ಹುರಿಯಿರಿ. ನಂತರ ಅದರ ಮೇಲೆ

ನಿಂಬೆ ರಸ, ಕೊತ್ತಂಬರಿ ಪುಡಿಯನ್ನು ಹಾಕಿ ಊಟಕ್ಕೆ ನೀಡಿ.”



Leave a Reply

Your email address will not be published. Required fields are marked *