ಚಿಲ್ಲಿ ಚಿಕನ್ ಈ ರೀತಿ ಮಾಡಿ ನೋಡಿ! (Andhra Chilli Chiken)

ಬೇಕಾಗುವ ಸಾಮಾಗ್ರಿಗಳು:

* ಒಂದು ಕೆಜಿ ಚಿಕನ್
* ರುಚಿಗೆ ತಕ್ಕ ಉಪ್ಪು
* ನಿಂಬೆ ರಸ
* ಶುಂಠಿ 2 ಇಂಚಿನಷ್ಟು
* ಬೆಳ್ಳುಳ್ಳಿ 8-10 ಎಸಳು
* ಸ್ವಲ್ಪ ಕರಿಬೇವಿನ ಎಲೆ
* ಒಣ ಮೆಣಸಿನ ಕಾಯಿ 8-10
* ಅಕ್ಕಿ 2 ಚಮಚ
* ಮೊಸರು ಅರ್ಧ ಕಪ್
* ಎಣ್ಣೆ
* 1/4 ಚಮಚ ಅರಿಶಿಣ
* ಸ್ವಲ್ಪ ಕೊತ್ತಂಬರಿ ಸೊಪ್ಪು


ತಯಾರಿಸುವ ವಿಧಾನ:

* ಚಿಕನ್ ಅನ್ನು ದೊಡ್ಡ ಲೆಗ್ ಪೀಸ್ ಆಗಿ ಕತ್ತರಿಸಬೇಕು.

* ನಂತರ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಉಪ್ಪು ನಿಂಬೆ ರಸ ಸವರಿ ಬದಿಯಲ್ಲಿಡಬೇಕು.

* ಶುಂಠಿ, ಬೆಳ್ಳುಳ್ಳಿ, ಒಣ ಕೆಂಪು ಮೆಣಸಿನಕಾಯಿ ನಂತರ ಅಕ್ಕಿ, ಕರಿಬೇವಿನ ಎಲೆ ಹಾಕಿ ನುಣ್ಣನೆ ರುಬ್ಬಬೇಕು.

* ಈಗ ಈ ಪೇಸ್ಟ್ ಅನ್ನು ಮೊಸರು ಜೊತೆ ಮಿಶ್ರ ಮಾಡಬೇಕು, ಸ್ವಲ್ಪ ಉಪ್ಪು ಹಾಕಿ ಮಿಶ್ರಮಾಡಿ, ಈ ಪೇಸ್ಟ್ ಅನ್ನು ಚಿಕನ್ ಗೆ ಸರಿಯಾಗಿ ಉಜ್ಜಿ 6 ಗಂಟೆಗಳ ಕಾಲ ಇಡಬೇಕು. ಇದನ್ನು ಫ್ರಿಜ್ ನಲ್ಲಿ ಬೇಕಾದರೂ ಇಡಬಹುದು.

* ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಚಿಕನ್ ಅನ್ನು ಮೈದಾದಲ್ಲಿ ಹೊರಳಿಸಿ ಬಾಣಲೆಗೆ ಹಾಕಿ ಫ್ರೈ ಮಾಡಬೇಕು. ಎಣ್ಣೆಯಲ್ಲಿಯೆ ಚಿಕನ್ ಚೆನ್ನಾಗಿ ಬೆಂದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಆಂಧ್ರ ಚಿಲ್ಲಿ ಚಿಕನ್ ರೆಡಿ. ಇದನ್ನು ಬಿಸಿಬಿಸಿಯಾಗಿ ತಿನ್ನಿ.

ಇದನ್ನು ತಯಾರಿಸಿ, ನಿಮ್ಮ ಅಭಿಪ್ರಾಯವನ್ನು ನಮಗೆ ಬರೆಯಿರಿ,ಅಲ್ಲದೆ ನಿಮಗೆ ಗೊತ್ತಿರುವ ವಿಶೇಷ ಅಡುಗೆ ನಮಗೆ ಬರೆದು ಕಳುಹಿಸಿದರೆ ಪ್ರಕಟಿಸಲಾಗುವುದು.



Leave a Reply

Your email address will not be published. Required fields are marked *