ರುಚಿಕರವಾದ ಚಿಕನ್ 65 ರೆಸಿಪಿ (chiken 65)

ಚಿಕನ್ 65ನ್ನು  ಎರಡು ರೀತಿಯಲ್ಲಿ ತಯಾರಿಸಬಹುದು. ತುಂಬಾ ಡ್ರೈ ಬೇಕೆನ್ನುವವರು ಡ್ರೈ ಆಗಿ ಮಾಡಬಹುದು, ಆದರೆ ಚಪಾತಿ, ಪರೋಟ ಜೊತೆ ತಿನ್ನುವಾಗ ಚಿಕನ್ 65 ಸ್ವಲ್ಪ ಗ್ರೇವಿ ರೀತಿ ಇದ್ದರೆ ಚೆಂದ. ಈ ಅಡುಗೆಯನ್ನು ತಯಾರಿಸಲು ಸಾಮಾನ್ಯವಾಗಿ ಚಿಕನ್ ಮಾಡಲು ಬಳಸುವ ಸಾಮಾಗ್ರಿಗಳು ಇದ್ದರೆ ಸಾಕು. ಈ ರೆಸಿಪಿ ಸುಲಭವಾಗಿ ಮಾಡಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
* ಒಂದು ಕೆಜಿ ಚಿಕನ್ (ಸಾಧರಣ ಗಾತ್ರದಲ್ಲಿ ಕತ್ತರಿಸಿದ್ದು)
* 3-4 ಚಮಚ ಖಾರದ ಪುಡಿ,
* 3 ಚಮಚ ಗರಂ ಮಸಾಲಾ ಪುಡಿ
* 2 ದೊಡ್ಡ ಈರುಳ್ಳಿ ಅಥವಾ ಸಾಧಾರಣ ಗಾತ್ರದ 3 ಈರುಳ್ಳಿ
* 2 ಚಮಚ ಶುಂಠಿ ಪೇಸ್ಟ್
* 2 ಚಮಚ ಬೆಳ್ಳುಳ್ಳಿ ಪೇಸ್ಟ್
* 3 ಹಸಿ ಮೆಣಸಿನಕಾಯಿ
* 2 ಟೊಮೆಟೊ
* ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಕರಿಬೇವಿನ ಎಲೆ

ತಯಾರಿಸುವ ವಿಧಾನ:

1. ಚಿಕನ್‌ ಅನ್ನು ತೊಳೆದು . ಕತ್ತರಿಸಿದ ಈರುಳ್ಳಿ (ಅರ್ಧದಷ್ಟು) ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು. ತುಂಬಾ ನೀರು ಹಾಕಬೇಡಿ. ಚಿಕನ್ ಬೆಂದಾಗ ನೀರಿನಂಶವಿರಬಾರದು, ಆದ್ದರಿಂದ ಬೇಯಲು ಅವಶ್ಯಕವಾದ ನೀರು ಮಾತ್ರ ಹಾಕಬೇಕು.

2. ಈಗ ಮತ್ತೊಂದು ಪಾತ್ರೆಯನ್ನು ಬಿಸಿ ಮಾಡಿ ನಂತರ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಕರಿಬೇವು, ಮತ್ತು ಕತ್ತರಿಸಿದ ಉಳಿದ ಅರ್ಧ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.

3.ಈಗ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಖಾರದಪುಡಿ, ಅರಿಶಿನಪುಡಿ, ಗರಂ ಮಸಾಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ,ಮಿಶ್ರ ಮಾಡಿ 5 ನಿಮಿಷ ಬೇಯಿಸಬೇಕು. ನಂತರ ಈ ಮಿಶ್ರಣಕ್ಕೆ ಬೇಯಿಸಿದ ಚಿಕನ್ ಹಾಕಿ ಮಿಶ್ರ ಮಾಡಿ ಮತ್ತೆ 5 ನಿಮಿಷ ಬೇಯಿಸಬೇಕು. ಈಗ ತಯಾರಾಗಿರುವ ಚಿಕನ್ 65ಗೆ ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.

ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Leave a Reply

Your email address will not be published. Required fields are marked *