ಚಿಕನ್ ಚಿಲ್ಲಿ ರೊಸ್ಟೆಡ್ (Chiken chilli Roasted)

ಬೇಕಾಗುವ ಸಾಮಗ್ರಿಗಳು

400 ಗ್ರಾಂ. ಕೋಳಿಮಾಂಸ
1 ಕಪ್ ಹುಳಿ ಮೊಸರು
¼ ಕಪ್ ಗೊಡಂಬಿ ಪೇಸ್ಟ್
1 ಟೀಸ್ಪೂನ್ ಜೀರಿಗೆ, ಗರಂ ಮಸಾಲ, ಅರಿಶಿನ, ಕೊತ್ತಂಬರಿ, 1 ಏಲಕ್ಕಿ
1ಸ್ಪೂನ್ ಶುಂಠಿ ಪೇಸ್ಟ್, ತುಪ್ಪ, ½ ಚಮಚ ಮೆಣಸಿನ ಪೇಸ್ಟ್

ಮಾಡುವ ವಿಧಾನ:
ದಪ್ಪ ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ. ತುಪ್ಪ ಕರಗಿ, ಕುದಿಯಲು ಆರಂಭವಾದಾಗ ಬೆಳ್ಳುಳ್ಳಿ, ಪುಡಿಮಾಡಿದ ಏಲಕ್ಕಿಯನ್ನು ಸೇರಿಸಿ. ಅದು ಚೆನ್ನಾಗಿ ಹುರಿದಾಗ ಜೀರಿಗೆಯನ್ನು ಸೇರಿಸಿ. ಕಂದುಬಣ್ಣಕ್ಕೆ

ತಿರುಗುವವರೆಗೆ ಬೇಯಿಸಿ ನಂತರ ಅರಿಶಿನ, ಗರಂ ಮಸಾಲ, ಕೊತ್ತಂಬರಿ ಪುಡಿಯನ್ನು ಸೇರಿಸಿ ಮತ್ತು ಮಸಾಲೆ ಹದವಾಗಿ ಬೆರೆಯುವವರೆಗೆ ಹುರಿಯಿರಿ. ಈಗ ಶುಂಠಿಯ ಪೇಸ್ಟ್ ಮತ್ತು ಮೆಣಸಿನ ಪೇಸ್ಟ್

ಅನ್ನು ಹಾಕಿ. ಹಸಿ ಪರಿಮಳ ಹೋಗುವವರೆಗೆ ಹುರಿಯಿರಿ, ನಂತರ ಮೊಸರನ್ನು ಹಾಕಿ. 5 ನಿಮಿಷಗಳವರೆಗೆ ಕದಡಿಸುತ್ತಾ ಬೇಯಿಸಿ. ನಂತರ ಮಾಂಸವನ್ನು ಸೇರಿಸಿ, ಸ್ವಲ್ಪ ಮಾತ್ರ ನೀರು ಹಾಕಿ,

ಚೆನ್ನಾಗಿ ಮಿಶ್ರ ಮಾಡಿ. ಮುಚ್ಚಳ ಇಟ್ಟು ಮಾಂಸ ಅರ್ಧ ಬೇಯುವವರೆಗೆ ಬೇಯಿಸಿ. ನಂತರ ಉಪ್ಪು, ಗೋಡಂಬಿ ಪೇಸ್ಟ್ ಅನ್ನು ಸೇರಿಸಿ. ಪದಾರ್ಥವು ತುಂಬಾ ಗಟ್ಟಿ ಇದ್ದರೆ ಮಾತ್ರ ನೀರು ಸೇರಿಸಿ.

ಚೆನ್ನಾಗಿ ಕದಡಿಸಿದ ನಂತರ ಮುಚ್ಚಳ ಇಟ್ಟು 15 ನಿಮಿಷಗಳವರೆಗೆ ಬೇಯಿಸಿ. ಮಾಂಸ ಚೆನ್ನಾಗಿ ಬೆಂದ ನಂತರ ಬಾಣಲೆಯನ್ನು ಒಲೆಯಿಂದ ಕೆಳಗಿಳಿಸಿ. ಸಿದ್ಧವಾದ ಚಿಕನ್ ಕೂರ್ಮವನ್ನು ಫ್ರೈ ಮಾಡಿದ



Leave a Reply

Your email address will not be published. Required fields are marked *