ತಂಡೂರಿ ಚಿಕನ್ (Tandoori Chicken)

ಬೇಕಾಗುವ ಸಾಮಾಗ್ರಿಗಳು:

ಚಿಕನ್, ಈರುಳ್ಳಿ, ಶುಂಠಿ ತುಂಡು, ಜೀರಿಗೆ ಪುಡಿ, ಮೆಣಸಿನ ಪುಡಿ ಅಥವಾ ಅರಶಿನ, ಉಪ್ಪು, ಬೆಳ್ಳುಳ್ಳಿ, ನಿಂಬೆ, ಎಣ್ಣೆ. ಸಾಂಬಾರ ಪದಾರ್ಥಗಳು- ಏಲಕ್ಕಿ, ಲವಂಗ, ಮೊಸರು, ಚಿಕನ್ ಮಸಾಲಾ, ದಾಲ್ಚೀನಿ.

ಪಾಕ ವಿಧಾನ:

ಹಸಿ ಚಿಕನ್ ಅನ್ನು ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಶಿನ ಸಾಂಬಾರ ಪದಾರ್ಥಗಳನ್ನು ಅಥವಾ ಗರಂ ಮಸಾಲ ಪುಡಿ, ಮೊಸರು, ತಂದೂರಿ ಬಣ್ಣ ಮತ್ತು ಉಪ್ಪು ಜತೆ ನೆನೆ ಹಾಕಿ. ಇದನ್ನು ಇಡೀ ರಾತ್ರಿ ರೆಫ್ರಿಜರೇಟರ್‌ನಲ್ಲಿ ನೆನೆಯಲು ಬಿಡಿ. ಚಿಕನ್ ನೆನೆದ ನಂತರ ನೀರು ಸೇರಿಸಿ ನೀರೆಲ್ಲಾ ಆವಿಯಾಗುವ ವರೆಗೆ ಬೇಯಿಸಿ. ಕಾವಲಿಯಲ್ಲಿ ಎಣ್ಣೆ ಅಗತ್ಯವಿದ್ದಷ್ಟು ಹಾಕಿ. ಕೆಲವೇ ಚಿಕನ್‌ ತುಂಡುಗಳನ್ನು ಎಣ್ಣೆಯಲ್ಲಿ ಹಾಕುತ್ತಾ ಕಂದು ಬಣ್ಣಕ್ಕೆ ಬರುವ ವರೆಗೆ ಹುರಿಯಿರಿ. ಚಿಕನ್‌ನಿಂದ ಎಣ್ಣೆ ಬಸಿದು ಆರಲು ಬಿಡಿ. ಈರುಳ್ಳಿ ವೃತ್ತಗಳಿಗೆ ಚಿಟಿಕೆ ತಂದೂರಿ ಬಣ್ಣ ಸೇರಿಸಿ. ನಿಂಬೆ ತುಂಡುಗಳಿಂದ ಅಲಂಕರಿಸಿ. ಚಿಟೆಕೆ ಉಪ್ಪು ಸೇರಿಸಿ ಬಡಿಸಿ.



Leave a Reply

Your email address will not be published. Required fields are marked *